ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮುಗಿಯುವ ಲಕ್ಷಣಗಳೇ ಕಾಣ್ತಿಲ್ಲ.. ಪಠ್ಯ ಪರಿಷ್ಕರಣೆ ಕೈ ಬಿಡುವಂತೆ ಇಂದು ಪ್ರತಿಭಟನೆ ನಡೆಸಲಾಗ್ತಿದೆ. ಇವತ್ತಿನ ಪ್ರತಿಭಟನೆಗೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಬೆಂಬಲ ಸೂಚಿಸಿದೆ. ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಇದುವರೆಗೂ ಮಕ್ಕಳಿಗೆ ಪುಸ್ತಕ ಸಿಕ್ಕಿಲ್ಲ. ಸರಿಯಾದ ಅರ್ಹತೆ ಇಲ್ಲದವರನ್ನ ಪಠ್ಯ ಪರಿಷ್ಕರಣೆ ಸಮಿತಿಗೆ ಸರ್ಕಾರ ನೇಮಿಸಿದೆ. ಶೈಕ್ಷಣಿಕವಾಗಿ ಕಳೆದ ಎರಡು ವರ್ಷಗಳಿಂದ ಶಾಲೆಗಳಿಗೆ ಸರ್ಕಾರ ತೊಂದರೆ ಕೊಡುತ್ತಲೇ ಬಂದಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕಿಡಿ ಕಾರಿದ್ದಾರೆ. ಇನ್ನು ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಗಳನ್ನು ಹಿಂದಕ್ಕೆ ಪಡೆಯದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ ಎಂದು ಕರವೇ ನಾರಾಯಣಗೌಡ ಎಚ್ಚರಿಸಿದ್ದಾರೆ. ರಾಜ್ಯದ ಶಾಂತಿ ಕದಡಿದರೆ ಸರ್ಕಾರವೇ ಅದರ ಹೊಣೆ ಹೊರಬೇಕು.. ಸರ್ಕಾರ ವಿವೇಕದಿಂದ ವರ್ತಿಸಿ ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಲಿ ಎಂದಿದ್ದಾರೆ.
#publictv #newscafe #hrranganath